ಬೆಳ್ತಂಗಡಿ ತಾಲ್ಲೂಕಿನ ಕಡಿರುದ್ಯಾವರ ಗ್ರಾಮದ ಗ್ರಾಹಕ ಸೇವಾ ಕೇಂದ್ರದ ಮೇಲ್ಛಾವಣಿಯುವ ಮಳೆಯಿಂದ ಸೊರುತ್ತಿದ್ದು ರಿಪೇರಿ ಮಾಡುವ ಅಗತ್ಯವಿತ್ತು.

ಒಕ್ಕೂಟದ ಸದಸ್ಯರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ಘಟಕ ಕುಕ್ಕಾವು-ಮುಂಡಾಜೆ ಘಟಕದ ಸ್ವಯಂ ಸೇವಕರು ಮೆಲ್ಚಾವಣಿಯ ದುರಸ್ಥಿ ಕಾರ್ಯ ಹಾಗೂ ಕೇಂದ್ರದ ಪರಿಸರದಲ್ಲಿ ಸ್ವಚ್ಛತೆ ಶ್ರಮದಾನ ನಡೆಸಿದರು. ಕಟ್ಟಡದ ಎದುರು ಅಂಗಳಕ್ಕೆ ಮಣ್ಣು ಹಾಕಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿರುತ್ತಾರೆ.

ಗ್ರಾಹಕ ಸೇವಾ ಕೇಂದ್ರದ ಸುವಿಧಾ ಸಹಾಯಕರಾದ ಆನಂದ ಗೌಡ. ಒಕ್ಕೂಟ ಅಧ್ಯಕ್ಷರು ಗೋಪಾಲ ಗೌಡ. ರೇಣುಕಾ. ಗ್ರಾಮ ಪಂಚಾಯತ್ ಅಧ್ಯಕ್ಷರು ರತ್ನವತಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸೂರಜ್ ಗೌಡ. ಕುಕ್ಕಾವು ಶೌರ್ಯ ವಿಪತ್ತು ಘಟಕದ ಸಂಯೋಜಕಿ ರಶ್ಮಿ. ಕಾನರ್ಪ ಒಕ್ಕೂಟದ ಸೇವಾಪ್ರತಿನಿಧಿ ಲೀಲಾವತಿ. ಘಟಕ ಪ್ರತಿನಿಧಿ ಲೋಕೇಶ್, ಸ್ವಯಂಸೇವಕರಾದ ಜಯಾನಂದ. ದಾಮೋದರ. ರವೀಂದ್ರ. ಸುರೇಶ ಪೂಜಾರಿ. ಹರೀಶ್ ದೇವಾಡಿಗ. ರಾಜೇಶ್. ಹರಿಣಿ. ಗೀತಾ. ಮೋಹಿನಿ. ಸರೋಜಿನಿ. ಶಕುಂತಲಾ ಉಪಸ್ಥಿತರಿದ್ದರು.