ಸರಕಾರಿ ಪ್ರೌಢಶಾಲೆಯ ಮೆಲ್ಚಾವಣಿಯಲ್ಲಿ ಅಳವಡಿಸಿದ ಸೋಲಾರ್ ಪ್ಯಾನೆಲ್  ಗಳ ಸ್ವಚ್ಛತಾ ಕಾರ್ಯ.

ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ಸರಕಾರಿ ಪ್ರೌಢಶಾಲೆಯ ಮೇಲ್ಚಾವಣಿಯಲ್ಲಿ ಅಳವಡಿಸಿದ್ದ ಸೋಲಾರ್ ಪ್ಯಾನೆಲ್ ಗಳನ್ನು ಸ್ವಚ್ಚತೆ ಮಾಡುವ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ನಡೆಸಿದರು.

ನಡ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮೋಹನ್ ರವರು ಶೌರ್ಯ ತಂಡದವರಲ್ಲಿ ಶಾಲಾ ಮೆಲ್ಚಾ ವಣಿಯ ದುರಸ್ಥಿ ಕಾರ್ಯ ಹಾಗೂ ಸೋಲಾರ್ ಅಳವಡಿಸಿದ ಪೆನೆಲ್ ಗಳನ್ನು ಸ್ವಚ್ಛತೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದರು.

ಶಾಲೆಯ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಘಟಕದ ಸಂಯೋಜಕಿ ವಸಂತಿ, ಘಟಕ ಪ್ರತಿನಿಧಿಗಳಾದ ಮಂಜುನಾಥ್, ಮೋಹನ್ ಮತ್ತು ಒಲ್ವಿನ್  ಇವರ ನೇತ್ರತ್ವದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು. ಘಟಕದ ಸ್ಯಂಸೇವಕರಾದ ಜಯರಾಮ್, ಲೀಲಾ ಮತ್ತಿತರರು ಶ್ರಮದಾನದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಮೋಹನ್. ಶಿಕ್ಷಕರಾದ ಸುರೇಶ್, ರವರು ಉಪಸ್ಥಿತರಿದ್ದರು. ಸ್ವಯಂ ಸೇವಕರು ನಡೆಸಿದ ಕೆಲಸ ಗಳನ್ನು ಗಮನಿಸಿದ ಶಾಲಾ ಮುಖ್ಯ ಶಿಕ್ಷಕರು ವಿಶೇಷವಾಗಿ ಅಭಿನಂದಿಸಿ ಶ್ಲಾಘನೆ ವ್ಯಕ್ತಪಡಿಸಿದರು.

Share Article
Previous ಬೆಳ್ತಂಗಡಿ: ಗ್ರಾಹಕ ಸೇವಾ ಕೇಂದ್ರದ ಮೇಲ್ಚಾವಣಿ ದುರಸ್ತಿ ಹಾಗೂ ಸ್ವಚ್ಚತೆ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved