ಮಡಿಕೇರಿ: ಚೆರಿಯಪರಂಬು ಸರಕಾರಿ ಪ್ರೌಢಶಾಲೆ ಪರಿಸರದಲ್ಲಿ ಸ್ವಚ್ಚತೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೆರಿಯಪರಂಬು ಸರಕಾರಿ ಪ್ರೌಢಶಾಲೆಯ ಪರಿಸರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಸ್ವಚ್ಚತಾ ಶ್ರಮದಾನ ನಡೆಯಿತು.

ಶಾಲಾ ಶಿಕ್ಷಕರು ಶಾಲೆಯ ಪರಿಸರದಲ್ಲಿ ಸ್ವಚ್ಚತೆ ಮಾಡಿಕೊಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಒಂದು ದಿನದ ಶ್ರಮದಾನವನ್ನು ಸ್ವಯಂಸೇವಕರು ನಡೆಸಿದರು.

ಮಳೆಗಾಲವಾಗಿರುವುದರಿಂದ ಶಾಲೆಯ ಸುತ್ತಮುತ್ತ ಹುಲ್ಲು, ಅನಗತ್ಯ ಗಿಡಗಂಟಿಗಳು ಬೆಳೆದು ನಿಂತು ಮಕ್ಕಳಿಗೆ ಓಡಾಡಲು ಸಮಸ್ಯೆ ಉಂಟಾಗಿತ್ತು. ಹುಳಹುಪ್ಪಡಿಗಳು, ಹಾವು ಮತ್ತಿತರ ಸರಿಸ್ರಪಗಳಿಂದ ತೊಂದರೆ ಉಂಟಾಗಬಹುದು ಎನ್ನುವ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ಹುಲ್ಲು, ಗಿಡಗಂಟಿಗಳನ್ನು ತೆರವು ಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ನೆರವು ಕೇಳಿದ್ದರು.

ಇದಕ್ಕೆ ಸ್ಪಂದಿಸಿದ ಯೋಜನೆಯ ಯೋಜನಾಧಿಕಾರಿ ಪುರುಶೋತ್ತಮ ರವರು ನಾಪೋಕ್ಲು ಶೌರ್ಯ ತಂಡಕ್ಕೆ ಶ್ರಮದಾನ ಮಾಡಿಕೊಡಲು ತಿಳಿಸಿದ್ದು ಈ ಪ್ರಕಾರವಾಗಿ ಶೌರ್ಯ ತಂಡದ ಸದಸ್ಯರು ಶ್ರಮದಾನ ನಡೆಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಮಡಿಕೇರಿ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ದಿವ್ಯ ಬಾಳೆಯಡ, ಸದಸ್ಯರಾದ ಉಮಾಲಕ್ಷ್ಮಿ, ಶ್ಯಾಮಲಾ, ಚಂದ್ರಕಲಾ, ರಮ್ಯಾ, ಶಂಕರ, ದಿಲಿಶ್, ಮಾಯಿಲಪ್ಪ, ಶರವಣ, ನಾರಾಯಣ, ರವಿ , ಪ್ರಾರ್ಥನ್, ಕೃಷ್ಣ ಇದ್ದರು.

Share Article
Previous ಗಡಾಯಿಕಲ್ಲಿನಲ್ಲಿ ಅಸ್ವಸ್ಥಗೊಂಡ ವ್ಯಕ್ತಿ, 1500 ಮೆಟ್ಟಿಲು ಏರಿ, ರಕ್ಷಣೆ ಮಾಡಿದ ಶೌರ್ಯ ತಂಡ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved