ಮಡಿಕೇರಿ: ಅಂಗನವಾಡಿ ಕೇಂದ್ರದ ಪರಿಸರದಲ್ಲಿ ಸ್ವಚ್ಚತೆ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮೊಣ್ಣಂಗೇರಿಯ ಅಂಗನವಾಡಿ ಕೇಂದ್ರದ ಪರಿಸರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಸ್ವಚ್ಚತಾ ಶ್ರಮದಾನ ನಡೆಯಿತು.

ಅಂಗನವಾಡಿ ಶಿಕ್ಷಕಿ ಸ್ವಚ್ಚತೆ ಮಾಡಿಕೊಡುವಂತೆ ಶೌರ್ಯ ತಂಡದ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದರು.  ಇದಕ್ಕೆ ಸ್ಪಂದಿಸಿದ ಯೋಜನೆಯ ಯೋಜನಾಧಿಕಾರಿ ಪುರುಶೋತ್ತಮ ರವರು ಮೊಣ್ಣಂಗೇರಿ ಶೌರ್ಯ ತಂಡಕ್ಕೆ ಶ್ರಮದಾನ ಮಾಡಿಕೊಡಲು ತಿಳಿಸಿದ್ದು ಈ ಪ್ರಕಾರವಾಗಿ ಶೌರ್ಯ ತಂಡದ ಸದಸ್ಯರು ಶ್ರಮದಾನ ನಡೆಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಘಟಕದ ಸಂಯೋಜಕಿ ಸಬೀನಾ. ಘಟಕ ಪ್ರತಿನಿಧಿ ಜನಾರ್ಧನ, ಸದಸ್ಯರಾದ ಜಯಂತಿ, ವಿಮಲ, ಮಾಧವ, ಪೂವಯ್ಯ, ಲೋಕೇಶ್, ಚಂದ್ರ ಶೇಖರ, ಯೋಗೇಶ್  ರವರು ಶ್ರಮದಾನದಲ್ಲಿ ಭಾಗವಹಿಸಿದರು.

Share Article
Previous ಮಡಿಕೇರಿ: ಚೆರಿಯಪರಂಬು ಸರಕಾರಿ ಪ್ರೌಢಶಾಲೆ ಪರಿಸರದಲ್ಲಿ ಸ್ವಚ್ಚತೆ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved