ಬ್ರಹ್ಮಾವರ ತಾಲ್ಲೂಕಿನ ಜಾನುವಾರು ಕಟ್ಟೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಶೌಚಾಲಯದ ಮಾಡು ( ತಗಡಿನ ಚಪ್ಪರ ) ಅತಿಯಾ ಗಾಳಿಗೆ ಹಾರಿ ಹೋದ ಘಟನೆ ನಡೆದಿದೆ.

ಮಕ್ಕಳ ಶೌಚಾಲಯವಾಗಿದ್ದು ಸರಿಪಡಿಸದೇ ಇದ್ದಲ್ಲಿ ತೊಂದರೆ ಉಂಟಾಗುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಹಕಾರ ಕೇಳಿದ್ದರು.
ಶಿಕ್ಷಕರ ಮನವಿಗೆ ಸ್ಪಂದಿಸಿದ ಮಂದಾರ್ಥಿ ಘಟಕದ ಸ್ವಯಂಸೇವಕರು ಸ್ಥಳಕ್ಕೆ ತೆರಳಿ ರಿಪೇರಿ ಮಾಡಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಮುಖ್ಯ ಶಿಕ್ಷಕರು, ಶೌರ್ಯ ತಂಡದ ಸಂಯೋಜಕಿ ಪಲ್ಲವಿ, ಸ್ವಯಂಸೇವಕರಾದ ಗೋಪಾಲ್ ಆಚಾರ್ಯ ,ಕರುಣಾಕರ, ಗಣೇಶ್ ಆಚಾರ್ಯ, ಸಂತೋಷ್ ಕುಲಾಲ್, ಭಾಸ್ಕರ್ ಆಚಾರ್ಯ, ಚಂದ್ರ ನಾಯ್ಕ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು