
ಮಂಗಳೂರು ತಾಲ್ಲೂಕಿನ ಸುರತ್ಕಲ್ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ದಿನಾಂಕ 20/09/25 ರಂದು ಸುರತ್ಕಲ್ ಗುಡ್ಡೆ ಕೊಪ್ಲ ಸಮುದ್ರ ಕಿನಾರೆಯಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಅಂತರ ರಾಷ್ಟ್ರೀಯ ಕಡಲ ತೀರದ ಸ್ವಚ್ಛತಾ ದಿನದ ಪ್ರಯುಕ್ತವಾಗಿ ಸ್ವಚ್ಛ ಸಾಗರ ಸುರಕ್ಷಿತ ಸಾಗರ ಪರಿಕಲ್ಪನೆಯಂತೆ ಸಮುದ್ರ ಕಿನಾರೆ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಕಡಲ ತೀರದುದ್ದಕ್ಕೂ ಹರಡಿರುವ ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಹರಿದ ಮೀನಿನ ಬಲೆ ಚೂರು ಗಳನ್ನು ಆರಿಸಿ ಕಡಲ ತೀರದ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಅಲ್ಲದೇ ಸಮುದ್ರ ತೀರದ ಜನರಿಗೆ ಪರಿಸರದ ಕುರಿತಾಗಿ ಜಾಗೃತಿ ಮೂಡಿಸಲಾಯಿತು.

ಸುರತ್ಕಲ್ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಗೀತಾ, ಭಾಗ್ಯವತಿ, ರೋಹಿತ್, ಪ್ರಸಾದ್, ಪವನ್ ಕುಮಾರ್ ಜಯರಾಮ್, ಭಾರತಿ, ಪದ್ಮನಾಭ, ಸುಲತ , ಸುಜಾತ ಭಾಗವಹಿಸಿದ್ದರು.