ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮನ್ ಪಲ್ಕೆ ಯಲ್ಲಿ ಶ್ರಮದಾನ ನಡೆಸಿದರು.

ಶಾಲೆಯ ಪರಿಸರದಲ್ಲಿ ಅನಗತ್ಯವಾಗಿ ಅಲ್ಲಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ನಿಂತಿದ್ದು ಅಪಾಯಕಾರಿಯಾಗಿ ಪರಿಣಮಿಸಿತ್ತು. ವಿದ್ಯಾರ್ಥಿಗಳಿಗೆ ಶಾಲೆಯ ಪರಿಸರದಲ್ಲಿ ಓಡಾಡಲು ಕಷ್ಠವಾಗುತ್ತಿತ್ತು. ಅಪಾಯಕಾರಿ ಸರಿಸೃಪಗಳು ಸೇರಿಕೊಂಡು ಮಕ್ಕಳಿಗೆ ಅಪಾಯ ಉಂಟಾಗಬಹುದು ಎನ್ನುವ ಹಿನ್ನೆಲೆಯಲ್ಲಿ ಶೌರ್ಯ ತಂಡದ ಸದಸ್ಯರು ಶ್ರಮದಾನ ನಡೆಸಿದ್ದಾರೆ.
ಘಟಕದ ಸದಸ್ಯರಾದ ಗಿರೀಶ, ಸುರೇಶ್ ಎನ್, ಕೇಶವ ಶೆಟ್ಟಿಗಾರ್, ಗೋಪಾಲ್ ಸಪಲ್ಯ, ರಮೇಶ್ ತೋಟ, ಶಿನಪ್ಪ ಗೌಡ, ವೆಂಕಪ್ಪ, ಮಮತ, ಸುನಂದ, ಚಂದ್ರಾವತಿ, ಜಯಶ್ರೀ, ತಾರಾನಾಥ, ಸುರೇಶ್ ಕುಮಾರ್, ಶ್ರೀಧರ, ಕೃಷ್ಣಪ್ಪ ಮಡಿವಾಳ, ಜಗದೀಶ ಶ್ರಮದಾನದಲ್ಲಿ ಭಾಗವಹಿಸಿದ್ದರು.