ಪುತ್ತೂರು ತಾಲ್ಲೂಕಿನ ಮಣ್ಣಿ ಮೇರು ಎಂಬಲ್ಲಿ ಒಬಂಟ್ಟಿ ಯಾಗಿ ವಾಸ ಮಾಡುತ್ತಿರುವ ಜಾನಕಿ ಎಂಬವರಿಗೆ ಮನೆ ರಚನೆಯ ಕೆಲಸದ ಶ್ರಮದಾನದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ನಡೆಸಿದರು.

ಸ್ಥಳೀಯ ದಾನಿಗಳ ನೆರವಿನಿಂದ ಹೊಸ ಮನೆ ಕಟ್ಟುವ ಕಾರ್ಯ ನಡೆಯುತ್ತಿದ್ದು ಶೌರ್ಯ ತಂಡದ ಸ್ವಯಂಸೇವಕರು ಮನೆ ನಿರ್ಮಾಣ ಕೆಲಸಕ್ಕೆ ಸಹಕಾರ ನೀಡಿದರು.
ಸ್ವಯಂಸೇವಕರಾದ ಮನೋಜ್ ಕುಮಾರ್ ಮಣಿಕ್ಕಳ, ಸದಾನಂದ ಶಿಬಾರ್ಲ, ಹರೀಶ್ ಒoರ್ಬೋಡಿ, ವಾಸಪ್ಪ ಬಂಡಾಡಿ, ಸುಜಾತ ರಂಜಾಳ, ಬೇಬಿ ಬಾರಿಕೆ, ಇಂದಿರಾ ಫೋರೋಲಿ, ರಾಜೇಶ್ ಪಿಜಕ್ಕಳ, ವಾಸುದೇವ ರಂಜಾಳ, ಮಮತಾ ಆಲಾಜೆ ಶ್ರಮದಾನದಲ್ಲಿ ಭಾಗವಹಿಸಿದ್ದರು.
