ಧರ್ಮಸ್ಥಳ ಸಮೀಪದ ಮುಂಡ್ರಪಾಡಿಯ ನಿವಾಸಿ ವಸಂತಿ ಎನ್ನುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಡಲಾಗಿದ್ದು, ಇವರ ಮನೆಯ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಚತಾ ಶ್ರಮದಾನವನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ನಡೆಸಿದರು.

ಧರ್ಮಸ್ಥಳ ಘಟಕದ ಸದಸ್ಯರಾದ ಪ್ರಕಾಶ್. ಶೆಟ್ಟಿ. ನೀಲದರ ಶೆಟ್ಟಿ ಗಂಗಾಧರ ಗೌಡ. ನಳಿನ್ ಕುಮಾರ್. ಮಾಲತಿ ಅನಿತ ಪ್ರಿಯ ಸುಮಿತ್ರಾ ಸುಜಾತಾ ಶ್ರಮದಾನದಲ್ಲಿ ಭಾಗವಹಿಸಿದ್ದರು.