ಉಡುಪಿಯ ಮಂಚಿಕುಮೇರಿ ಮುಖ್ಯ ರಸ್ತೆಯಲ್ಲಿರುವ ಗೋ ಗ್ರಾಸವನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಂಗ್ರಹಿಸಿ ಗೋಶಾಲೆಗೆ ತಲುಪಿಸಿರುತ್ತಾರೆ.

ಮಧ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಸಿದ್ದಪ್ಪ ಮತ್ತು ಸ್ಥಳೀಯರಾದ ಉಮೇಶ್ ಈ ಕೆಲಸಕ್ಕೆ ಸಹಕರಿಸಿದರು. ಸಂಗ್ರಹಿಸಿದ ಗೋಗ್ರಾಸವನ್ನು ಬಾಲಕೃಷ್ಣ ಮತ್ತು ರಾಜೇಶ್ ಶೆಟ್ಟಿ ಇವರ ಆಟೋದಲ್ಲಿ ನೀಲಾವರ ಗೋಶಾಲೆಗೆ ನೀಡಲಾಯಿತು.

ಸ್ವಯಂಸೇವಕರಾದ ಹರೀಶ ಎನ್, ಬಾಲಕೃಷ್ಣ, ಮರಿಯಪ್ಪ, ಅಶೋಕ ಉಪಸ್ಥಿತರಿದ್ದರು.