ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀ ಧರ್ಮಸ್ಥಳ ಶೌರ್ಯ ಕರಿಮಣೇಲು ಘಟಕದ ಸ್ವಯಂಸೇವಕರು ಬೆಳ್ತಂಗಡಿ ತಾಲ್ಲೂಕಿನ ಖಂಡಿಗ ಶಾಲಾ ಆವರಣದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಶಾಲೆಯ ಆವರಣದಲ್ಲಿ ಅನಗತ್ಯ ಗಿಡಗಂಟಿಗಳು ಬೆಳೆದಿದ್ದವು. ಪೊದೆಗಳು ಬೆಳೆದು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿತ್ತು. ಇವುಗಳನ್ನು ಕಟಾವು ಮಾಡುವ ಕೆಲಸ ಮಾಡಲಾಯಿತು.
ಸ್ವಯಂಸೇವಕರಾದ ಶೋಭಾ, ಗಣೇಶ್ ,ನೀಲಯ್ಯ , ದೋಗು ನಾಯ್ಕ್ , ಸುಗುಣ , ಸುಮಾ, ಪ್ರೀತೇಶ್, ಆನಂದ ಶ್ರಮದಾನದಲ್ಲಿ ಭಾಗವಹಿಸಿದ್ದರು.