ಭಟ್ಕಳ ತಾಲ್ಲೂಕಿನ ಜಾಲಿ ಗ್ರಾಮದ ಬಬ್ಬನಕಲ್ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಸ್ವಚ್ಚತಾ ಶ್ರಮದಾನ ನಡೆಸಿದರು.

ಶಾಲೆಯ ಆವರಣದಲ್ಲಿ ಅನಗತ್ಯವಾಗಿ ಬೆಳೆದಿದ್ದ ಹುಲ್ಲು, ಕಸಕಡ್ಡಿಗಳನ್ನು ತೆರವು ಮಾಡಲಾಯಿತು. ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಚತೆ ಮಾಡಲಾಯಿತು.
ಘಟಕದ ಸದಸ್ಯರಾದ ಮುಕ್ತಾ , ಮಂಜುನಾಥ ಎನ್, ವೆಂಕಟೇಶ್ ಬಿ, ಗಜಾನನ, ಹರೀಶ್, ಮಾಸ್ತಿ, ಕೃಷ್ಣ ಇವರು ಶ್ರಮದಾನದಲ್ಲಿ ಭಾಗವಹಿಸಿದ್ದರು.