ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆನೇಕಲ್ ತಾಲ್ಲೂಕಿನ ರಾಮಸಾಗರ ಎಂಬಲ್ಲಿ ಪರಿಸರ ಕಾರ್ಯಕ್ರಮ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ನಿರ್ದೇಶಕರಾದ ಉಮರಬ್ಬ ರವರು ಗಿಡ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಮಸಾಗರ ಕೆರೆಯ ದಡದಲ್ಲಿ ಸುಮಾರು 8 ಎಕರೆ ಪ್ರದೇಶ ವಿದ್ದು ಕೆರೆಯ ಸುತ್ತಮುತ್ತ 400 ಹಣ್ಣು ಹಂಪಲು ಗಿಡ ನಾಟಿ ಮಾಡಲಾಯಿತು.
ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ವಿದ್ಯಾ, ಮುನಿಕೃಷ್ಣ, ಗುರುಮೂರ್ತಿ, ಕಲಾ, ಶೋಭಾ ಗಿಡ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ತಾಲ್ಲೂಕು ಯೋಜನಾಧಿಕಾರಿ ನಾಗೇಶ್ ರವರು ಸ್ವಯಂಸೇವಕರಿಗೆ ಪ್ರೇರಣೆ ನೀಡಿದರು. ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.