ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಅಂಗನವಾಡಿ ಕೇಂದ್ರದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಬಂಟ್ವಾಳ ತಾಲ್ಲೂಕಿನ ತೆಂಕಬೆಳ್ಳೂರು ಗ್ರಾಮದ ಪಡೀಲ್ ಬೈಲ್ ಅಂಗನವಾಡಿ ಕೇಂದ್ರದ ಸುತ್ತಮುತ್ತ ಸ್ವಚ್ಚತಾ ಶ್ರಮದಾನ ಮಾಡಲಾಯಿತು.
ಘಟಕ ಪ್ರತಿನಿಧಿ ಜಗದೀಶ್ ಆಚಾರ್ಯ, ಸದಸ್ಯರಾದ ದಿನೇಶ್ ಆಚಾರ್ಯ, ಪ್ರಮೋದ್ ಆಚಾರ್ಯ, ಪ್ರಶಾಂತ್ ಆಚಾರ್ಯ, ಗಣೇಶ ಆಚಾರ್ಯ, ಕೇಶವ ಆಚಾರ್ಯ, ಪ್ರಶಾಂತ್ ಧನೂಪೂಜೆ, ಪ್ರೇಮ, ಭಾರತಿ ಕಮ್ಮಾಜೆ ಭಾಗವಹಿಸಿದ್ದರು.