ಹೆಬ್ರಿ ತಾಲ್ಲೂಕಿನ ಅಜೆಕಾರು ಗ್ರಾಮದಲ್ಲಿ ರಚಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ನೂತನ ಘಟಕ ಪ್ರತಿನಿಧಿ ಆಯ್ಕೆ ಮಾಡಲಾಯಿತು.

ಗ್ರಾಮಾಭಿವೃದ್ದಿ ಯೋಜನೆಯ ವಲಯ ಕಛೇರಿ ಅಜೆಕಾರಿನಲ್ಲಿ ನಡೆಸಲಾದ ವಿಶೇಷ ಸಭೆಯಲ್ಲಿ ತಾಲ್ಲೂಕು ಯೋಜನಾಧಿಕಾರಿ ರೇಷ್ಮಾರವರ ಉಪಸ್ಥಿತಿಯಲ್ಲಿ ನೂತನ ಘಟಕ ಪ್ರತಿನಿಧಿಯನ್ನಾಗಿ ಪ್ರವೀಣ್ ರವರನ್ನು ಆಯ್ಕೆ ಮಾಡಲಾಯಿತು.
ಘಟಕದ ಸಂಯೋಜಕಿ ವಿಜಯ ಕಾಮತ್, ಸದಸ್ಯರಾದ ಪ್ರವೀಣ್, ಪ್ರದೀಪ್, ರಾಜೇಶ್, ದೇವೇಂದ್ರ, ಅಶೋಕ್, ಕೃಷ್ಣ, ಆದಿತ್ಯ, ಸಂಜೀವ, ಶ್ರಿಮತಿ, ರೇಷ್ಮಾ, ಮಮತಾ, ಸುಮಿತ್ರ, ಸುಶ್ಮಿತಾ, ಜ್ಯೋತಿ, ಸುಲೋಚನಾ, ಮಲ್ಲಿಕಾ, ಹಾಗೂ ದೀಪ ಸಭೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿಗಳಾದ ರೇಷ್ಮಾ ರವರು ಮಾತನಾಡಿ ಅಜೆಕಾರು ಶೌರ್ಯ ಘಟಕದ ಸ್ವಯಂಸೇವಕರು ಮಾಡುತ್ತಿರುವ ಸಾಮಾಜಿಕ ಸೇವೆಗಳು, ವಿಪತ್ತು ನಿರ್ವಹಣಾ ಸೇವೆಗಳು ಮಾದರಿಯಾಗಿವೆ. ಆಪತ್ ಬಾಂಧವರಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಕರ ಸೇವೆಗಳು ಅನೇಕರ ಜೀವ ಉಳಿಸಲು ಸಹಕಾರಿಯಾಗಿದೆ. ಇದೇ ರೀತಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಸ್ವಯಂಸೇವಕರಿಗೆ ಪ್ರೇರಣೆ ನೀಡಿದರು.

ಲೆಕ್ಕಪರಿಶೋಧಕರಾದ ಪುಷ್ಪ, ಸಭೆಯಲ್ಲಿ ಭಾಗವಹಿಸಿದ್ದರು.