ಬೈಂದೂರು: ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದ ಗಂಗೊಳ್ಳಿ ಶೌರ್ಯ ಘಟಕದ ಸ್ವಯಂಸೇವಕರು.

ಬೈಂದೂರು ತಾಲ್ಲೂಕಿನ ಗಂಗೊಳ್ಳಿ ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಗಂಗೊಳ್ಳಿಯ ರಾಮ ಮಂದಿರದ ಬಳಿಯಿರುವ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಶ್ರಮದಾನ ನಡೆಸಿದರು.

ಗುಂಡಿಗಳಿಂದಾಗಿ ಬೈಕ್ ಮತ್ತು ವಾಹನ ಸಂಚಾರಕ್ಕೆ ಅನಾನುಕೂಲವಾಗಿತ್ತು. ಇದನ್ನರಿತ ಸ್ವಯಂಸೇವಕರು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದರು.

ಗಂಗೊಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಜಯಂತಿ ಖಾರ್ವಿಯವರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷರಾದ ಮಹೇಶ್ ಶೇಟ್ ರವರನ್ನು ಸಂಪರ್ಕಿಸಿ ಗುಂಡಿ ಮುಚ್ಚುವ ಬಗ್ಗೆ ಸಹಕಾರ ಕೇಳಿದಾಗ ಸ್ಪಂದಿಸಿದ ಸ್ವಯಂಸೇವಕರು ಒಂದು ದಿನದ ಶ್ರಮದಾನ ನಡೆಸಿದರು.

ರಸ್ತೆ ರಿಪೇರಿ ಮಾಡಿದ್ದರಿಂದ ವಾಹನ ಸವಾರರಿಗೆ ಸಾರ್ವಜನಿಕರಿಗೆ ಅನುಕೂಲವಾಗಿದೆ.

ಸ್ವಯಂಸೇವಕರಾದ ಮಹೇಶ್,  ಪ್ರಶಾಂತ್, ಭೂಷಣ್,  ರಾಘವೇಂದ್ರ , ಮಂಜುನಾಥ,  ನಾಗರತ್ನ,  ನಾಗರಾಜ, ವಿಶ್ವನಾಥ,    ಗೋಪಾಲ, ಸುಬ್ರಹ್ಮಣ್ಯ, ಸುಂದರ ಶ್ರಮದಾನದಲ್ಲಿ ಭಾಗವಹಿಸಿದರು.

Share Article
Previous ಬೈಂದೂರು: ಹಸುವಿನ ರಕ್ಷಣೆ; ಶೌರ್ಯ ತಂಡದವದ ಮಾಹಿತಿಯಂತೆ ಪಶುವೈದ್ಯರಿಂದ ಚಿಕಿತ್ಸೆ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved