ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಾಮದಪದವು ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಅಂಗನವಾಡಿ ಕೇಂದ್ರ ಪರಾರಿ ಅಜ್ಜಿಬೆಟ್ಟು ರಸ್ತೆ ಬದಿ ಸ್ವಚ್ಛತೆ ಶ್ರಮದಾನ ನಡೆಸಲಾಯಿತು.
ಘಟಕ ಪ್ರತಿನಿಧಿ ರವೀಂದ್ರ ರೈ, ಪ್ರಕಾಶ್ ಪೂಜಾರಿ, ಚೇತನ್ ಗಿರೀಶ್ ನಾಯಕ್, ಮಾಧವ ,ಸುರೇಶ ಶೆಟ್ಟಿ, ದನವತಿ ಶ್ರಮದಾನದಲ್ಲಿ ಭಾಗವಹಿಸಿದರು.