ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯಾದಗಿರಿ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಂದೇಪಲ್ಲಿ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಬಸ್ ತಂಗುದಾಣದ ಸ್ವಚ್ಚತಾ ಶ್ರಮದಾನವನ್ನು ನಡೆಸಿದರು.

ಯಾದಗಿರಿ ತಾಲ್ಲೂಕಿನ ನಂದೇಪಲ್ಲಿ ಗ್ರಾಮದ ಬಸ್ ತಂಗುದಾಣವನ್ನು ಸ್ವಚ್ಚತೆ ಮಾಡುವ ಮತ್ತು ಬಣ್ಣ ಬಳಿಯುವ ಶ್ರಮದಾನವನ್ನು ಸ್ವಯಂಪ್ರೇರಣೆಯಿಂದ ನಡೆಸಿದರು.
ಬಣ್ಣವನ್ನು ಸ್ಥಳೀಯ ಗಣ್ಯರು ನೀಡಿ ಸ್ವಯಂಸೇವಕರು ಮಾಡುತ್ತಿರುವ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಘಟಕದ ಸದಸ್ಯರಾದ ಬಸವರಾಜ, ಭೀಮಾಶಂಕರ, ಮಲ್ಲೇಶ,ಅಂಜಪ್ಪ,ಭೀಮಪ್ಪ ,ಜಾಕೀಯಾ, ಭಾಸ್ಕರ್, ಸಂಪೂರ್ಣ, ಶ್ರೀದೇವಿ, ಶಂಕ್ರಪ್ಪ, ಮಲ್ಲಿಕಾರ್ಜುನ ಶ್ರಮದಾನದಲ್ಲಿ ಭಾಗವಹಿಸಿದರು.
ವಲಯದ ಮೇಲ್ವಿಚಾರಕರಾದ ಭೀಮರಡ್ಡಿ ಇವರು ಸ್ವಯಂಸೇವಕರಿಗೆ ಪ್ರೇರಣೆ ನೀಡಿದರು.
ಶೌರ್ಯ ತಂಡದ ಸ್ವಯಂಸೇವಕರ ಈ ಸೇವೆಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.