ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶಿರಸಿ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಗಣೇಶನಗರದ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಆಣೆಕಟ್ಟು ಸ್ವಚ್ಚತಾ ಶ್ರಮದಾನವನ್ನು ನಡೆಸಿದರು.

ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ್ ಎಂ, ಶಿರಸಿ ತಾಲೂಕಿನ ಯೋಜನಾಧಿಕಾರಿ ಶ್ರೀ ಮಂಜುನಾಥ್ ಹಾಗೂ ವಲಯದ ಮೇಲ್ವಿಚಾರಕಾರದ ಅರ್ಚನಾ ಇವರ ಮಾರ್ಗದರ್ಶನದಡಿಯಲ್ಲಿ ಶ್ರಮದಾನ ನಡೆಸಲಾಯಿತು.
ಅಂದಳ್ಳಿ ಎಂಬಲ್ಲಿನ ಕೃಷಿಕರಿಗೆ ನೀರಿಗೆ ಅನುಕೂಲವಾಗುವಂತೆ ಆಣೆಕಟ್ಟು ರಚನೆ ಮಾಡಲಾಗಿದ್ದು ಈ ಆಣೆಕಟ್ಟಿಗೆ ಅಡ್ಡಲಾಗಿ ಮರಮಟ್ಟುಗಳು, ಕಸಕಡ್ಡಿಗಳು ಸಂಗ್ರಹವಾಗಿ ನೀರು ಸೇತುವೆಯನ್ನು ದಾಟದೇ ರೈತರ ತೋಟಗಳಿಗೆ ಅಗತ್ಯ ನೀರು ಹರಿದು ಬರದೇ ತೊಂದರೆ ಉಂಟಾಗಿತ್ತು.

ಗಣೇಶ ನಗರ ಶಿರಸಿ “ಎ” ಘಟಕದ ಘಟಕದ ಸ್ವಯಂಸೇವಕರು ಪ್ರತಿ ವರ್ಷದಂತೆ ಈ ವರ್ಷವೂ ಸ್ಥಳೀಯ ಭಾಗದ ಕೃಷಿಕರ ಬೇಡಿಕೆ ಮೇರೆಗೆ ಸೇತುವೆ ಸ್ವಚ್ಛತಾ ಕೆಲಸವನ್ನು ಮಾಡಿದರು.
ಸೇತುವೆಯ ಅಡಿಯಲ್ಲಿ ಸಂಗ್ರಹವಾದ ಕಸ ಕಡ್ಡಿ, ಮರದ ಕೊಂಬೆಗಳನ್ನು ತೆರವುಗೊಳಿಸುವ ಶ್ರಮದಾನವನ್ನು ನಡೆಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು.

ಘಟಕದ ಘಟಕ ಪ್ರತಿನಿಧಿ ಜಗದೀಶ್ ಗೌಡ, ಸಮಿತಿಯ ಮಾಸ್ಟರ್ ಶಿಲ್ಪ ಭಾಸ್ಕರ್, ಘಟಕ ಪ್ರತಿನಿಧಿ ಸಂಧ್ಯಾ ಆಚಾರಿ, ಘಟಕ ಸಂಯೋಜಕಿ ರೋಹಿಣಿ ಕಾರಳ್ಳಿ, ಗೌರಿ ದೇವಳ್ಕರ್, ನಾಗರಾಜ್ ಸುತ್ತುಕೋಟೆ, ಕಾರ್ತಿಕ್ ಸುತಾರಿಯ, ಮರಿಯಾ ಪಿಂಟೋ, ಸಂತೋಷ್ ಕಾರಳ್ಳಿ, ಪ್ರತಾಪ್ ಪಟಗಾರ, ಮಂಜುನಾಥ್ ಕಾಣಡೆ, ಕೇಶವ್ ಪಾವಸ್ಕರ್, ಕಲ್ಪನಾ ಕಲ್ಲೂರ್ ಶ್ರಮದಾನದಲ್ಲಿ ಭಾಗವಹಿಸಿದರು.