
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಕಾರ್ಯಕ್ರಮ ಕಾಡಿನಲ್ಲಿ ಪ್ರಾಣಿಗಳಿಗೆ ಹಣ್ಣು ಹಂಪಲು ಗಿಡ ನಾಟಿ ಕಾರ್ಯಕ್ರಮವನ್ನು ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ನಡೆಸಿದರು.
ನಾಲ್ಕೂರು ಗ್ರಾಮದ ಕುಂಟುಮಾಯ ಅರಣ್ಯ ಪ್ರದೇಶದಲ್ಲಿ ಕಾಡಿನ ಹಣ್ಣು ಹಂಪಲುಗಳ ಗಿಡ ನಾಟಿ ಮಾಡಲಾಯಿತು.

ನೇರಳೆ,ಮಾವು, ಹಲಸು, ಪುನರ್ಪುಳಿ, ರಾಂಬೂಟನ್, ಬಟರ್ ಫ್ರೂಟ್,ಪೇರಳೆ ಮುಂತಾದ 500 ಕ್ಕೂ ಹೆಚ್ಚಿನ ಗಿಡಗಳನ್ನು ನಾಟಿ ಮಾಡಲಾಯಿತು.
ಜನಜಾಗೃತಿ ವೇದಿಕೆ ಗುತ್ತಿಗಾರು ವಲಯದ ಅಧ್ಯಕ್ಷರಾದ ಶ್ರೀ ಮಿತ್ರದೇವ ಮಾಡಪ್ಪಾಡಿ ಇವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವಿಜಯಕುಮಾರ್ ಚಾರ್ಮಾತ, ಅರಣ್ಯ ರಕ್ಷಕರಾದ ಶ್ರೀ ಬಸಪ್ಪ, ಒಕ್ಕೂಟಗಳ ಅಧ್ಯಕ್ಷರಾದ ಶ್ರೀ ಕೇಶರಾಜ್ ಹೊಸೋಳಿಕೆ, ಲೋಹಿತ್ ಚೆಮ್ನೂರು,ತಾಲೂಕು ಕೃಷಿ ಅಧಿಕಾರಿ ಶ್ರೀ ರಮೇಶ್, ಗುತ್ತಿಗಾರು ವಲಯ ಮೇಲ್ವಿಚಾರಕರಾದ ರಾಜೇಶ್,ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನಾಲ್ಕೂರು ಶೌರ್ಯ ಘಟಕದ ಸ್ವಯಂಸೇವಕರಾದ ಲೋಹಿತ್,ಕರುಣಾಕರ, ನಳಿನಾಕ್ಷಿ, ಅಶ್ವತ್ಥ್,ಜಯಶ್ರೀ, ಸತೀಶ್, ಭವಾನಿ,ಚಂದ್ರಶೇಖರ,ಪ್ರಜ್ವಲ್, ಕಾರ್ತಿಕ್, ಭರತ್,ಚಂದ್ರಿಕಾ, ದೀಪಕ್,ಹರಿಶ್ಚಂದ್ರ ಇವರು ಗಿಡ ನಾಟಿ ಶ್ರಮದಾನದಲ್ಲಿ ಭಾಗವಹಿಸಿ ಗಿಡ ನಾಟಿ ಮಾಡಿದರು.